Sunday, 6 March 2011

Office Bearers of Rajaka yaane Madivala Samaja Seva Sangha

ಅಧ್ಯಕ್ಷರ ಮಾತು

1952ರಲ್ಲಿ ಶ್ರೀ ರಜಕ ಕುಲೋದ್ಧಾರಕ ಎಂಬ ಹೆಸರಿನಲ್ಲಿ ನಮ್ಮ ಸಂಘವು ಪ್ರಾರಂಭವಾಯಿತು. ಬೆಳ್ಳಾಯರು ಗ್ರಾಮದ ನಾಗು ಹೆಂಗಸುರವರ ಮಗ ಬಾಬು ಕುಂದರ್‌ರವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ದಿನಾಂಕ 30-05-1962 ರಲ್ಲಿ ಸಿ. ಶ್ರೀನಿವಾಸ ರಾವ್ ಇವರಿಂದ ಕಾರ್ನಾಡು ಗ್ರಾಮದ ಸರ್ವೆ ನಂಬ್ರ 13.2ರಲ್ಲಿ 0.15ಎಕರೆ ಮತ್ತು ದಿನಾಂಕ 21-03-1963 ರಲ್ಲಿ ನಾಗಮ್ಮ ಶಾನುಭೋಗ್ ಇವರಿಂದ ಕಾರ್ನಾಡು ಗ್ರಾಮದ ಸರ್ವೆ ನಂಬ್ರ 13.8ರಲ್ಲಿ 0.8ಎಕರೆ ಜಮೀನನ್ನು ರಜಕ ಕುಲೋದ್ಧಾರಕ ಸಂಘದ ಹೆಸರಿನಲ್ಲಿ ಪಡೆಯಲಾಯಿತು.
1964ರಲ್ಲಿ ಶ್ರೀ ರಜಕ ಕುಲೋದ್ಧಾರಕ ಸಂಘ ಹೆಸರನ್ನು ಬದಲಾಯಿಸಿ ಶ್ರೀ ರಜಕ ಸಮಾಜ ಸೇವಾ  ಸಂಘ ಮುಲ್ಕಿ ಮಂಗಳೂರು ತಾಲೂಕು ದ.ಕ. ಎಂಬ ಹೆಸರಿನಲ್ಲಿ ಪುನರ್ ನಾಮಕರಣ ಮಾಡಿ ತೋಕೂರು ಧೂಮ ಮಡಿವಾಳ ಇವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಶ್ರೀ ರಜಕ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ತೋಕೂರು ಧೂಮ ಮಡಿವಾಳರು ಶ್ರೀ ರಜಕ ಕುಲೋದ್ಧಾರಕ ಸಂಘದ ಹೆಸರಿನಲ್ಲಿದ್ದ ಜಮೀನನ್ನು ಶ್ರೀ ರಜಕ ಸಮಾಜ ಸೇವಾ ಸಂಘಕ್ಕೆ 14-10-1964 ರಲ್ಲಿ ನೋಂದಾವಣೆ ಮಾಡಲಾಗಿದೆ ಎಂಬ ವಿಷಯ ಸಂಘದ ದಾಖಲೆಯಲ್ಲಿ ಕಂಡು ಬರುತ್ತದೆ. ಪ್ರಸ್ತುತ ನಮ್ಮ ಸಂಘವು ರಜಕ ಯಾನೆ ಮಡಿವಾಳ ಸಮಾಜ ಸೇವಾ ಸಂಘ ಹರಿಹರ ಕ್ಷೇತ್ರ ಕಾರ್ನಾಡು ಮುಲ್ಕಿ ಮಂಗಳೂರು ತಾಲೂಕು ದ.ಕ. ಎಂಬ ಹೆಸರಿನಲ್ಲಿ ಕರೆಯಲ್ಪಡುವುದು.
ಹಿರಿಯರಿಂದ ಸ್ಥಾಪಿಸಲ್ಪಟ್ಟ ನಮ್ಮ ಸಂಘವು ಸುಮಾರು 15ವರ್ಷಗಳಿಂದ ಸದಸ್ಯತ್ವವನ್ನು ನೋಂದಾಯಿಸದೇ ಇರುವುದರಿಂದ ಹಾಗೂ ನಾಯಕತ್ವದ ಕೊರತೆಯಿಂದ ಬಹಳ ಹಿಂದುಳಿದಿರುತ್ತದೆ. ಪ್ರಸ್ತುತ ಮಡಿವಾಳ ಸಮಾಜ ಬಾಂಧವರ ಸಭೆಗಳನ್ನು ಗ್ರಾಮಗಳಲ್ಲಿ ನಡೆಸಿ ಸಂಘಟನೆಗೆ ಪ್ರೋತ್ಸಾಹ ನೀಡುತ್ತಾ, ಸದಸ್ಯತ್ವವನ್ನು ನೋಂದಾಯಿಸುತ್ತಾ, ಪುನರ್ ಸಂಘಟನೆಯನ್ನು ಮಾಡುವ ಈ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಮಂಡಳಿಯನ್ನು ರಚನೆ ಮಾಡಿಕೊಂಡು ಗುರುಹಿರಿಯರ, ಸಮಾಜ ಬಾಂಧವರ ಸಲಹೆ, ಸೂಚನೆ ಮಾರ್ಗದರ್ಶನ ನಮ್ಮ ಪಡೆಯುತ್ತಾ ಸಂಘಟನೆಗೆ ಪೂರಕವಾಗಿ ಮಡಿವಾಳ ಸಮಾಜ ಸೇವಾ ಸಂಘ ಹರಿಹರ ಕ್ಷೇತ್ರ ಕಾರ್ನಾಡು ಮುಲ್ಕಿ ಸಭಾಂಗಣದಲ್ಲಿ ನಮ್ಮ ಸಮಾಜದ ಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಕರಿಂಜೆ ಮೂಡಬಿದ್ರೆ ಇವರ ಪಾದಪೂಜೆ ಮತ್ತು ಆಶೀರ್ವಚನದೊಂದಿಗೆ ಸಂಘಟನೆಗೆ ಚಾಲನೆ ದೊರೆಯಿತು. ಸಂಘಟನೆಗೆ ಪೂರಕವಾಗಿ ಕಾರ್ಯಕಾರಿ ಮಂಡಳಿ, ಗೌರವ ಸಲಹಾ ಮಂಡಳಿ, ಮಹಿಳಾ ವೇದಿಕೆ, ಯುವಸೇವಾದಳ, ಮುಂಬಯಿ ವಲಯ ಸಮಿತಿ ಹಾಗೂ ಸಮಾಜ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ಸಮಿತಿ, ಸಂಪನ್ಮೂಲ ಸಮಿತಿ, ಕಟ್ಟಡ ನಿರ್ವಹಣಾ ಉಸ್ತುವಾರಿ ಸಮಿತಿ ರಚಿಸಲಾಯಿತು. ಬೆಂಗಳೂರು ವಲಯ ಸಮಿತಿಯನ್ನು ರಚಿಸುವ ಪ್ರಯತ್ನದಲ್ಲಿದೆ. ಸಮಾಜ ಬಾಂಧವರ ಬಡ ಮಕ್ಕಳಿಗಾಗಿ ಶ್ರೀ ರಜಕ ವಿದ್ಯಾನಿಧಿ ಸಮಿತಿಯನ್ನು ರಚಿಸಲಾಯಿತು.
ಮುಂದಿನ ದಿನಗಳಲ್ಲಿ ಸುಮಾರು 1ಕೋಟಿ ಅಂದಾಜು ವೆಚ್ಚದಲ್ಲಿ ಭವ್ಯವಾದ ಶ್ರೀ ರಜಕ ಸಮಾಜ ಭವನ ನಿರ್ಮಾಣವನ್ನು ಮಾಡುವರೇ ಗುರುಹಿರಿಯರಿದ್ದು ತೀರ್ಮಾನಿಸಿರುತ್ತೇವೆ. ನಮ್ಮ ಸಮಾಜದ ಸಂಘಟನೆಯಲ್ಲಿ ಪಾಲ್ಗೊಂಡ ಹಿರಿಯರಿಗೆ, ಹಿರಿಯರ ಮನೆತನದವರಿಗೆ ಗೌರವಾರ್ಪಣೆ ಕಾರ್ಯಕ್ರಮದ ಮೂಲಕ ಗೌರವಿಸಿರುತ್ತೇವೆ. ನಮ್ಮ ಸಂಘದ ಕಾರ್ಯಕ್ರಮಕ್ಕೆ, ಅಭಿವೃದ್ಧಿಗಾಗಿ ರೂ. 5000ಕ್ಕಿಂತ ಹೆಚ್ಚಿನ ಆರ್ಥಿಕ ಸಹಾಯವನ್ನು ನೀಡಿದ ನಮ್ಮ ಸಮಾಜ ಬಾಂಧವರಾದ ಶ್ರೀ ಯತಿರಾಜ್ ಸಾಲ್ಯಾನ್ ಮತ್ತು ಶ್ರೀ ಧರ್ಮಾನಂದ ಕಾಟಿಪಳ್ಳ ಇವರನ್ನು ಗೌರವಿಸಲಾಯಿತು. ಮುಂದಿನ ದಿನದಲ್ಲಿ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವ ತೀರ್ಮಾನವನ್ನು ಕೈಗೊಂಡಿರುತ್ತೇವೆ. ಈ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿರುತ್ತೇವೆ. ನಮ್ಮ ನಾಯಕತ್ವದಲ್ಲಿ, ಗುರುಹಿರಿಯರ ಆಶೀರ್ವಾದದಲ್ಲಿ ಮಾಡಿರುವ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಪ್ರೋತ್ಸಾಹ ಸಹಕಾರ ಸಲಹೆ ಸೂಚನೆಯನ್ನು ನೀಡಿರುತ್ತೀರಿ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಮುಂದಿನ ವರ್ಷದ ಕಾರ್ಯಕ್ರಮಗಳಿಗೆ ಪ್ರೋತ್ಸಾಹವನ್ನು ನೀಡುವಂತೆ ವಿನಂತಿಸುತ್ತೇವೆ.
ಸಮಾಜ ಬಾಂಧವರೆಲ್ಲರ ಸಹಕಾರದೊಂದಿಗೆ ನಮ್ಮ ಈ ಸಂಘವು ಉತ್ತಮವಾದ ಸಂಘಟನೆಯಾಗಬೇಕಾಗಿದೆ. ತಾವೆಲ್ಲರೂ ಈ ಸಂಘದಲ್ಲಿ ಸದಸ್ಯತ್ವವನ್ನು ಸ್ವೀಕರಿಸಿಕೊಂಡು, ಪ್ರತೀವರ್ಷ ನವೀಕರಿಸಿಕೊಂಡು ಬಂದಲ್ಲಿ ಮಾತ್ರ ಸಾಧ್ಯ. ನಾವು ಮಡಿವಾಳ ಸಮಾಜ ಬಾಂಧವರೆಂದು ಹೇಳಿಕೊಂಡರೆ ಸಾಲದು ನನ್ನ ಸಮಾಜದ ಸಂಘಟನೆಯಲ್ಲಿ ನಾನೂ ಕೂಡ ಒಬ್ಬ ಸಕ್ರಿಯ ಸದಸ್ಯನಾಗಿದ್ದೇನೆ ಎಂಬ ಭಾವನೆ ನಮ್ಮಲ್ಲಿ ಮೂಡಿಬಂದರೆ ನಮ್ಮ ಸಮಾಜವನ್ನು ಕಟ್ಟಿಬೆಳೆಸಲು ಸಾಧ್ಯವಾಗುವುದು

ಇತೀ ತಮ್ಮ ವಿಶ್ವಾಸಿ
ಕಟೀಲು ಸಂಜೀವ ಮಡಿವಾಳ
ಅಧ್ಯಕ್ಷರು, ರಜಕ ಯಾನೆ ಮಡಿವಾಳ ಸೇವಾ ಸಂಘ
ಕಾರ್ನಾಡು ಮುಲ್ಕಿ


ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ನೀಡಲು  madivalasamaja@gmail.com  ¸A¥Qð¹j.

ಶ್ರೀ ಯತಿರಾಜ್ ಸಾಲ್ಯಾನ್ ಸನ್ಮಾನ 
ಶ್ರೀ ಧರ್ಮಾನಂದ ಕಾಟಿಪಳ್ಳ ಸನ್ಮಾನ

ರಜಕ ಯಾನೆ ಮಡಿವಾಳ ಸಮಾಜ ಸೇವಾ ಸಂಘ(ರಿ.) ಆಡಳಿತ ಮಂಡಳಿಯ ಪದಾಧಿಕಾರಿಗಳು

ದಿನಾಂಕ 14-2-2010 ರಂದು ಸಂಘದ ಅಧ್ಯಕ್ಷರಾದ ಭಾಸ್ಕರ ಸಾಲಿಯಾನ್ ಕಲ್ಲಾಪುರವರ ಸಭಾಧ್ಯಕ್ಷತೆಯಲ್ಲಿ  ನಡೆದ 2010-2011ರಿಂದ 2015-2016ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳು
ಅಧ್ಯಕ್ಷರು                                 : ಕಟೀಲು ಸಂಜೀವ ಮಡಿವಾಳ
ಉಪಾಧ್ಯಕ್ಷರು                           : ಕರುಣಾಕರ ಗುಜರನ್ ಕಿಲ್ಪಾಡಿ
ಕೋಶಾಧಿಕಾರಿ                         : ಯೋಗೀಶ್ ಸಾಲ್ಯಾನ್ ಕಾರ್ನಾಡು
ಕಾರ್ಯದರ್ಶಿ                            : ಸುಬ್ರಹ್ಮಣ್ಯ ಆರ್ ಎಕ್ಕಾರ್
ಜೊತೆ ಕಾರ್ಯದರ್ಶಿ                    : ವಾರಿಜ ಪಡುಪಣಂಬೂರು  
ಸಂಘಟನಾ ಕಾರ್ಯದರ್ಶಿ             : ಅಶೋಕ ಕೊಲಕಾಡಿ
ಸಾರ್ವಜನಿಕ ಸಂಪರ್ಕ ಅಧಿಕಾರಿ    : ಸತೀಶ್ ಗುಜರನ್ ಕಾರ್ನಾಡು

ಆಡಳಿತ ಮಂಡಳಿಯ ನಿರ್ದೇಶಕರು

ಹರೀಶ್ ಕುಮಾರ್, ಕಿಲ್ಪಾಡಿ, ದಿವಾಕರ ಸಾಲ್ಯಾನ್ ಐಕಳ, ಶಕುಂತಳ ಸಾಲ್ಯಾನ್ ಐಕಳ, ಸುಮತಿ ಸಾಲ್ಯಾನ್ ಕಾಪಿಕಾಡು ಮೆನ್ನಬೆಟ್ಟು, ಬಾಬು ರಾಜು ಸಾಲ್ಯಾನ್ ಐಕಳ, ಭಾಸ್ಕರ ಸಾಲಿಯಾನ್ ಶಿಬರೂರು, ಉಮೇಶ್ ಮಡಿವಾಳ ಕೆಮ್ರಾಲ್, ಶೇಖರ ಮಡಿವಾಳ ಕವತ್ತಾರು, ಚಂದ್ರಹಾಸ್ ಕುಂದರ್ ಕೊಂಡೆಮೂಲ, ಶಶಿಕಾಂತ್ ಆರ್. ಸಾಲ್ಯಾನ್ ಬಡಗಯೆಕ್ಕಾರು.
ಮಹಿಳಾ ಸೇವಾ ದಳ
ಗೌರವ ಅಧ್ಯಕ್ಷರು            : ಶ್ರೀ ಮೀನಾಕ್ಷಿ, ಧರ್ಮಾನಂದ ಕುಂದರ್, ಕಿನ್ನಿಗೋಳಿ
ಅಧ್ಯಕ್ಷರು                       : ಶ್ರೀಮತಿ ಸುನಿತಾ ಗೋವಿಂದ ಮಡಿವಾಳ ಬೆಳ್ಳಾಯರು
ಉಪಾಧ್ಯಕ್ಷರು                 : ಶ್ರೀಮತಿ ಸುಮಾ ವಿಶ್ವನಾಥ ಕಿಲ್ಪಾಡಿ.
                                      ಕುಮಾರಿ ರೇಖಾ ಸಂಜೀವ ಸಾಲ್ಯಾನ್, ಕಕ್ವ
ಕಾರ್ಯದರ್ಶಿ                  : ಶ್ರೀಮತಿ ನವೀತ ಪ್ರಮೋದ್ ಕುಬೇರ್
ಜೊತೆ ಕಾರ್ಯದರ್ಶಿ        :  ಕುಮಾರಿ ಸುಮ ರಾಜು ಸಾಲ್ಯಾನ್, ಕಿನ್ನಿಗೋಳಿ
                                      ಶ್ರೀಮತಿ ಆಶಾ ರಮೇಶ್, ಐ.ಕೆ. ಬಡಗ ಎಕ್ಕಾರು.
ಸಂಘಟನಾ ಕಾರ್ಯದರ್ಶಿ : ಕುಮಾರಿ ಸುಶ್ಮ ಮುದ್ದು ಗುಜರನ್ ಸೂರಿಂಜೆ.
                                     ಶ್ರೀಮತಿ ಭವಾನಿ ಪುರಂದರ ಸಾಲ್ಯಾನ್, ಶಿಬರೂರು.
                                     ಶ್ರೀಮತಿ ಲತಾ ಶಶೀಂದ್ರ, ಕಲ್ಲಾಪು.

ಯುವ ಸೇವಾ ದಳ

ಗೌರವ ಅಧ್ಯಕ್ಷರು            : ಪ್ರವೀಣ್ ಸಾಲ್ಯಾನ್, ಐಕಳ
ಅಧ್ಯಕ್ಷರು                      : ಕಿರಣ್ ಕುಮಾರ್, ಶಿಮಂತೂರು
ಉಪಾಧ್ಯಕ್ಷರು                : ಸಂತೋಷ್ ಕಿಲ್ಪಾಡಿ, ಕರುಣಾಕರ ಕುಂದರ್, ಉಲ್ಲಂಜೆ
ಕಾರ್ಯದರ್ಶಿ                 : ಶಶಿಧರ್ ಶಿವಪ್ಪ ಸಾಲ್ಯಾನ್, ಕಕ್ವ
ಜೊತೆ ಕಾರ್ಯದರ್ಶಿ       : ದುರ್ಗಾಪ್ರಸಾದ್ ದಯಾನಂದ ಸಾಲ್ಯಾನ್, ಕಟೀಲು
                                     ರಾಜೇಶ್ ಬುನ್ನಾಣ್, ಪೆರ್ಮುದೆ
ಕೋಶಾಧಿಕಾರಿ               : ಆನಂದ ಮಡಿವಾಳ, ಪಟ್ಟೆ
ಸಾಂಸ್ಕೃತಿಕ ಕಾರ್ಯದರ್ಶಿ: ಪ್ರಮೋದ್ ಕುಮಾರ್, ಕುಬೆವೂರು

ಯೋಜನಾ ಸಮಿತಿ

ಕಾರ್ಯಾಧ್ಯಕ್ಷರು   :  ಶ್ರೀ ಧಮೇಂದ್ರ ಕಾಟಿಪಲ್ಲ
ಉಪಾಧ್ಯಕ್ಷರು       :  ಚಂದ್ರಹಾಸ ಸಾಲ್ಯಾನ್, ಶಿಬರೂರು.
ನಿರ್ದೇಶಕರು        :  ಹರೀಶ್ ಕುಮಾರ್ ಕಿಲ್ಪಾಡಿ
                             ಸುಂದರ ಸಾಲಿಯಾನ್ ಶಿಬರೂರು
                             ಕಿಶೋರ್ ಸಿ. ಸಾಲಿಯಾನ್ ಕಿನ್ನಿಗೋಳಿ
                             ನಂದಿನಿ ರವಿ ಸಾಲಿಯಾನ್ ಪೆರಾರ ಬಜಪೆ
                             ಸುಮಾವಿಶ್ವನಾಥ್ ಕಿಲ್ಪಾಡಿ
                             ಸತೀಶ್ ಚೇಳಾರು

ಸಂಪನ್ಮೂಲ ಸಮಿತಿ

ಕಾರ್ಯಾಧ್ಯಕ್ಷರು    : ಶ್ರೀ ಯತಿರಾಜ್ ಸಾಲ್ಯಾನ್, ಸುರತ್ಕಲ್
ಉಪಾಧ್ಯಕ್ಷರು       :  ಶ್ರೀ ವಿನೋದ್ ಸಾಲ್ಯಾನ್, ಒಳಲಂಕೆ
ನಿರ್ದೇಶಕರು        :  ಶ್ರೀ ಬಾಲಕೃಷ್ಣ ಕುಂದರ್, ಬಜಪೆ
                             ಶ್ರೀ ಯೋಗೀಶ್ ಕುಳಾಯಿ
                             ಶ್ರೀ ದಿವಾಕರ್ ಸಾಲ್ಯಾನ್ ಐಕಳ
                             ಶ್ರೀ ಗೋವಿಂದ ಮಡಿವಾಳ ಪಡುಪಣಂಬೂರು
                             ಶ್ರೀಮತಿ ಮೀನಾಕ್ಷಿ ಧರ್ಮಾನಂದ ಕುಂದರ್, ಕಿನ್ನಿಗೋಳಿ
                             ಶ್ರೀ ಕಿಶೋರ್ ವಿ. ಸಾಲ್ಯಾನ್ ಬಪ್ಪಬೈಲು, ಕಿನ್ನಿಗೋಳಿ

ಕಟ್ಟಡ ನಿರ್ವಹಣಾ ಉಸ್ತುವಾರಿ ಸಮಿತಿ

ಕಾರ್ಯಾಧ್ಯಕ್ಷರು   : ಶ್ರೀ ನಾಗೇಶ್ ಸಾಲ್ಯಾನ್ ಒಳಲಂಕೆ
ಉಪಾಧ್ಯಕ್ಷರು       : ಶ್ರೀ ಸೀನ ಸಾಲ್ಯಾನ್ ಕಲ್ಲಾಪು
ನಿರ್ದೇಶಕರು        : ಶ್ರೀ ಆನಂದ ಸಾಲ್ಯಾನ್ ಶಿಬರೂರು
                           ಶ್ರೀ ಶೇಖರ್ ಸಾಲ್ಯಾನ್ ಕಾರ್ನಾಡು
                           ಶ್ರೀ ಸಂತೋಷ್ ಕುಮಾರ್ ಕಿಲ್ಪಾಡಿ

MUMBAI ZONAL COMMITTEE
President            :  Sri Shivaram U. Kundar Borivili (W)
Vice President    :    Sri P.N. Gujaran Borivili (  )
Secretary            :   Sri Tukaram Madivala Goregaon (W)
Treasurer           :    Sri Devendra Bunnan Vasai
Directors            :    Sri P. S. Salian Bolivili (W) 
                                 Sri Rama B. Madival Vasai
                                 Sri Seena Salian Shibaroor Borivili (  )
                                 Sri Darmananda R. Kundar Chembur
                                 Sri Vittal D. Salian Andheri
                                 Sri Sudhakar Putran Nasik
                                 Sri Shivaram A. Putran Ghatkopar
                                 Sri Ramananda R. Salian, Malad