1952ರಲ್ಲಿ ಶ್ರೀ ರಜಕ ಕುಲೋದ್ಧಾರಕ ಎಂಬ ಹೆಸರಿನಲ್ಲಿ ನಮ್ಮ ಸಂಘವು ಪ್ರಾರಂಭವಾಯಿತು. ಬೆಳ್ಳಾಯರು ಗ್ರಾಮದ ನಾಗು ಹೆಂಗಸುರವರ ಮಗ ಬಾಬು ಕುಂದರ್‌ರವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ದಿನಾಂಕ 30-05-1962 ರಲ್ಲಿ ಸಿ. ಶ್ರೀನಿವಾಸ ರಾವ್ ಇವರಿಂದ ಕಾರ್ನಾಡು ಗ್ರಾಮದ ಸರ್ವೆ ನಂಬ್ರ 13.2ರಲ್ಲಿ 0.15ಎಕರೆ ಮತ್ತು ದಿನಾಂಕ 21-03-1963 ರಲ್ಲಿ ನಾಗಮ್ಮ ಶಾನುಭೋಗ್ ಇವರಿಂದ ಕಾರ್ನಾಡು ಗ್ರಾಮದ ಸರ್ವೆ ನಂಬ್ರ 13.8ರಲ್ಲಿ 0.8ಎಕರೆ ಜಮೀನನ್ನು ರಜಕ ಕುಲೋದ್ಧಾರಕ ಸಂಘದ ಹೆಸರಿನಲ್ಲಿ ಪಡೆಯಲಾಯಿತು.
1964ರಲ್ಲಿ ಶ್ರೀ ರಜಕ ಕುಲೋದ್ಧಾರಕ ಸಂಘ ಹೆಸರನ್ನು ಬದಲಾಯಿಸಿ ಶ್ರೀ ರಜಕ ಸಮಾಜ ಸೇವಾ ಸಂಘ ಮುಲ್ಕಿ ಮಂಗಳೂರು ತಾಲೂಕು ದ.ಕ. ಎಂಬ ಹೆಸರಿನಲ್ಲಿ ಪುನರ್ ನಾಮಕರಣ ಮಾಡಿ ತೋಕೂರು ಧೂಮ ಮಡಿವಾಳ ಇವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಶ್ರೀ ರಜಕ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ತೋಕೂರು ಧೂಮ ಮಡಿವಾಳರು ಶ್ರೀ ರಜಕ ಕುಲೋದ್ಧಾರಕ ಸಂಘದ ಹೆಸರಿನಲ್ಲಿದ್ದ ಜಮೀನನ್ನು ಶ್ರೀ ರಜಕ ಸಮಾಜ ಸೇವಾ ಸಂಘಕ್ಕೆ 14-10-1964 ರಲ್ಲಿ ನೋಂದಾವಣೆ ಮಾಡಲಾಗಿದೆ ಎಂಬ ವಿಷಯ ಸಂಘದ ದಾಖಲೆಯಲ್ಲಿ ಕಂಡು ಬರುತ್ತದೆ. ಪ್ರಸ್ತುತ ನಮ್ಮ ಸಂಘವು ರಜಕ ಯಾನೆ ಮಡಿವಾಳ ಸಮಾಜ ಸೇವಾ ಸಂಘ ಹರಿಹರ ಕ್ಷೇತ್ರ ಕಾರ್ನಾಡು ಮುಲ್ಕಿ ಮಂಗಳೂರು ತಾಲೂಕು ದ.ಕ. ಎಂಬ ಹೆಸರಿನಲ್ಲಿ ಕರೆಯಲ್ಪಡುವುದು.
ಹಿರಿಯರಿಂದ ಸ್ಥಾಪಿಸಲ್ಪಟ್ಟ ನಮ್ಮ ಸಂಘವು ಸುಮಾರು 15ವರ್ಷಗಳಿಂದ ಸದಸ್ಯತ್ವವನ್ನು ನೋಂದಾಯಿಸದೇ ಇರುವುದರಿಂದ ಹಾಗೂ ನಾಯಕತ್ವದ ಕೊರತೆಯಿಂದ ಬಹಳ ಹಿಂದುಳಿದಿರುತ್ತದೆ. ಪ್ರಸ್ತುತ ಮಡಿವಾಳ ಸಮಾಜ ಬಾಂಧವರ ಸಭೆಗಳನ್ನು ಗ್ರಾಮಗಳಲ್ಲಿ ನಡೆಸಿ ಸಂಘಟನೆಗೆ ಪ್ರೋತ್ಸಾಹ ನೀಡುತ್ತಾ, ಸದಸ್ಯತ್ವವನ್ನು ನೋಂದಾಯಿಸುತ್ತಾ, ಪುನರ್ ಸಂಘಟನೆಯನ್ನು ಮಾಡುವ ಈ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಮಂಡಳಿಯನ್ನು ರಚನೆ ಮಾಡಿಕೊಂಡು ಗುರುಹಿರಿಯರ, ಸಮಾಜ ಬಾಂಧವರ ಸಲಹೆ, ಸೂಚನೆ ಮಾರ್ಗದರ್ಶನ ನಮ್ಮ ಪಡೆಯುತ್ತಾ ಸಂಘಟನೆಗೆ ಪೂರಕವಾಗಿ ಮಡಿವಾಳ ಸಮಾಜ ಸೇವಾ ಸಂಘ ಹರಿಹರ ಕ್ಷೇತ್ರ ಕಾರ್ನಾಡು ಮುಲ್ಕಿ ಸಭಾಂಗಣದಲ್ಲಿ ನಮ್ಮ ಸಮಾಜದ ಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಕರಿಂಜೆ ಮೂಡಬಿದ್ರೆ ಇವರ ಪಾದಪೂಜೆ ಮತ್ತು ಆಶೀರ್ವಚನದೊಂದಿಗೆ ಸಂಘಟನೆಗೆ ಚಾಲನೆ ದೊರೆಯಿತು. ಸಂಘಟನೆಗೆ ಪೂರಕವಾಗಿ ಕಾರ್ಯಕಾರಿ ಮಂಡಳಿ, ಗೌರವ ಸಲಹಾ ಮಂಡಳಿ, ಮಹಿಳಾ ವೇದಿಕೆ, ಯುವಸೇವಾದಳ, ಮುಂಬಯಿ ವಲಯ ಸಮಿತಿ ಹಾಗೂ ಸಮಾಜ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ಸಮಿತಿ, ಸಂಪನ್ಮೂಲ ಸಮಿತಿ, ಕಟ್ಟಡ ನಿರ್ವಹಣಾ ಉಸ್ತುವಾರಿ ಸಮಿತಿ ರಚಿಸಲಾಯಿತು. ಬೆಂಗಳೂರು ವಲಯ ಸಮಿತಿಯನ್ನು ರಚಿಸುವ ಪ್ರಯತ್ನದಲ್ಲಿದೆ. ಸಮಾಜ ಬಾಂಧವರ ಬಡ ಮಕ್ಕಳಿಗಾಗಿ ಶ್ರೀ ರಜಕ ವಿದ್ಯಾನಿಧಿ ಸಮಿತಿಯನ್ನು ರಚಿಸಲಾಯಿತು.
ಮುಂದಿನ ದಿನಗಳಲ್ಲಿ ಸುಮಾರು 1ಕೋಟಿ ಅಂದಾಜು ವೆಚ್ಚದಲ್ಲಿ ಭವ್ಯವಾದ ಶ್ರೀ ರಜಕ ಸಮಾಜ ಭವನ ನಿರ್ಮಾಣವನ್ನು ಮಾಡುವರೇ ಗುರುಹಿರಿಯರಿದ್ದು ತೀರ್ಮಾನಿಸಿರುತ್ತೇವೆ. ನಮ್ಮ ಸಮಾಜದ ಸಂಘಟನೆಯಲ್ಲಿ ಪಾಲ್ಗೊಂಡ ಹಿರಿಯರಿಗೆ, ಹಿರಿಯರ ಮನೆತನದವರಿಗೆ ಗೌರವಾರ್ಪಣೆ ಕಾರ್ಯಕ್ರಮದ ಮೂಲಕ ಗೌರವಿಸಿರುತ್ತೇವೆ. ನಮ್ಮ ಸಂಘದ ಕಾರ್ಯಕ್ರಮಕ್ಕೆ, ಅಭಿವೃದ್ಧಿಗಾಗಿ ರೂ. 5000ಕ್ಕಿಂತ ಹೆಚ್ಚಿನ ಆರ್ಥಿಕ ಸಹಾಯವನ್ನು ನೀಡಿದ ನಮ್ಮ ಸಮಾಜ ಬಾಂಧವರಾದ ಶ್ರೀ ಯತಿರಾಜ್ ಸಾಲ್ಯಾನ್ ಮತ್ತು ಶ್ರೀ ಧರ್ಮಾನಂದ ಕಾಟಿಪಳ್ಳ ಇವರನ್ನು ಗೌರವಿಸಲಾಯಿತು. ಮುಂದಿನ ದಿನದಲ್ಲಿ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವ ತೀರ್ಮಾನವನ್ನು ಕೈಗೊಂಡಿರುತ್ತೇವೆ. ಈ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿರುತ್ತೇವೆ. ನಮ್ಮ ನಾಯಕತ್ವದಲ್ಲಿ, ಗುರುಹಿರಿಯರ ಆಶೀರ್ವಾದದಲ್ಲಿ ಮಾಡಿರುವ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಪ್ರೋತ್ಸಾಹ ಸಹಕಾರ ಸಲಹೆ ಸೂಚನೆಯನ್ನು ನೀಡಿರುತ್ತೀರಿ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಮುಂದಿನ ವರ್ಷದ ಕಾರ್ಯಕ್ರಮಗಳಿಗೆ ಪ್ರೋತ್ಸಾಹವನ್ನು ನೀಡುವಂತೆ ವಿನಂತಿಸುತ್ತೇವೆ.
ಸಮಾಜ ಬಾಂಧವರೆಲ್ಲರ ಸಹಕಾರದೊಂದಿಗೆ ನಮ್ಮ ಈ ಸಂಘವು ಉತ್ತಮವಾದ ಸಂಘಟನೆಯಾಗಬೇಕಾಗಿದೆ. ತಾವೆಲ್ಲರೂ ಈ ಸಂಘದಲ್ಲಿ ಸದಸ್ಯತ್ವವನ್ನು ಸ್ವೀಕರಿಸಿಕೊಂಡು, ಪ್ರತೀವರ್ಷ ನವೀಕರಿಸಿಕೊಂಡು ಬಂದಲ್ಲಿ ಮಾತ್ರ ಸಾಧ್ಯ. ನಾವು ಮಡಿವಾಳ ಸಮಾಜ ಬಾಂಧವರೆಂದು ಹೇಳಿಕೊಂಡರೆ ಸಾಲದು ನನ್ನ ಸಮಾಜದ ಸಂಘಟನೆಯಲ್ಲಿ ನಾನೂ ಕೂಡ ಒಬ್ಬ ಸಕ್ರಿಯ ಸದಸ್ಯನಾಗಿದ್ದೇನೆ ಎಂಬ ಭಾವನೆ ನಮ್ಮಲ್ಲಿ ಮೂಡಿಬಂದರೆ ನಮ್ಮ ಸಮಾಜವನ್ನು ಕಟ್ಟಿಬೆಳೆಸಲು ಸಾಧ್ಯವಾಗುವುದು
ಇತೀ ತಮ್ಮ ವಿಶ್ವಾಸಿ
ಕಟೀಲು ಸಂಜೀವ ಮಡಿವಾಳ
ಅಧ್ಯಕ್ಷರು, ರಜಕ ಯಾನೆ ಮಡಿವಾಳ ಸೇವಾ ಸಂಘ
ಕಾರ್ನಾಡು ಮುಲ್ಕಿ
ಕಟೀಲು ಸಂಜೀವ ಮಡಿವಾಳ
ಅಧ್ಯಕ್ಷರು, ರಜಕ ಯಾನೆ ಮಡಿವಾಳ ಸೇವಾ ಸಂಘ
ಕಾರ್ನಾಡು ಮುಲ್ಕಿ
ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಮತ್ತು ಮಾಹಿತಿಗಳನ್ನು ನೀಡಲು madivalasamaja@gmail.com UɸA¥Qð¹j.
ಶ್ರೀ ಯತಿರಾಜ್ ಸಾಲ್ಯಾನ್ ಸನ್ಮಾನ
ಶ್ರೀ ಧರ್ಮಾನಂದ ಕಾಟಿಪಳ್ಳ ಸನ್ಮಾನ
No comments:
Post a Comment